ನೈಜ ಸೌಂದರ್ಯ
 ಕೋಮಲೆಯ ಕೋಮಲದ ಕದಪುಗಳ ನುಣ್ಪಿಂದೆ ,
  ಕಾಮಿನಿಯ  ಕಮನೀಯ  ಅಧರಗಳ ರಸದಿಂದೆ
ಕಾಮಾಕ್ಷಿಯರ  ಕಮಲಪತ್ರಾಯ ತಾಕ್ಷಿಗಳೆಸವ  
    ಬೇಟ ಭಾವದಿಂದೆ.                     ||1||

ಪಾಮರನೆ  ಜೀವನವ  ಬೆಳಗಿಪಲು ಬಯಸುವರೆ
    ಸಮನಿಸಲು ಜರೆಯು ತಾನಿವುಗಳುರೆ ನಶಿಸುವುವು
ಹೇ  ಮರುಳ  ನಿನ್ನಾತ್ಮನನಡರಿಪುದು ಕಗ್ಗತ್ತಲೆಯ
     ಕತ್ತಲೆಯೆ ಕಡೆಗೆ.                       ||2||

ಆದೊಡನುನಯದ ನೆಡತೆ, ವಿವೇಕ  ದೃಢ ಮನವು,
     ಸದ್ವಿಚಾರ ಶಾಂತತೆ, ಸರಳಜೀವನ ಬಯಕೆ, 
ತೃಪ್ತಿ  ಸಚ್ಚರಿತೆ  ಮತ್ತದರೊಡನೆ  ಹೃದಯಗಳ ಸಮಾನತೆಯ
     ಸಾನುರಾಗದ ಸೊಡರ ಕುಡಿಯು.               ||3||
 
ಇವಿಲ್ಲದನು ನಾನೊಲ್ಲೆ ಆ ನಿನ್ನ ಅಧರ ರಸವನು,
     ಕೊಮಲದ ಕದಪುಗಳ,  ಮತ್ತೆ ಆ ನಿನ್ನ 
       ಹವಳ ತುಟಿಯ.                    ||4|| 
           ~~♣♣♣--
ಇಂಗ್ಲಿಷ್‍ ಕವಿ:ಥಾಮಸ್ ಕೇರ್ವ್-ನ(1594-1640)
ಕವಿ:ಥಾಮಸ್ ಕೇರ್ವ್-ನ(1594-1640):"ತಿರಸ್ಕಾರವ ಮರಳಿಸಿದೆ" ಕವನದ ಕನ್ನಡ ಅನುವಾದ- ಅನಾಮಿಕ)
'ಗೋಲ್ಡನ್ ಟ್ರಜರಿ' ಕವನ ಸಂಗ್ರಹದಲ್ಲಿ 'ಟ್ರು ಬ್ಯೂಟಿ' ಹೆಸರಿನಲ್ಲಿ ಮೊದಲ ಮೂರು ಪದ್ಯಗಳು ಮಾತ್ರಾ ಇವೆ. ಅವನ್ನು ಮಾತ್ರಾ ಅನುವಾದಿಸಿದೆ.(ಅದರಲ್ಲಿ ಕವನದ ಮೂಲ ಭಾವ ಬದಲಾವಣೆ ಆಗಿದೆ).
ಇದು ಇಂಗ್ಲಿಷ್ ಭಾಷೆಯಲ್ಲಿನ ನೂರು ಅತ್ಯುತ್ತಮ ಕವನಗಳು (ಭಾವಗೀತಾತ್ಮಕ) - ಎರಡನೇ ಸರಣಿಯಲ್ಲಿ ಸೇರಿದೆ. Disdain Returned.
                    

THE TRUE BEAUTY
						
He that loves a rosy cheek
    Or a coral lip admires,
Or from star-likeeyes admires,
   Fuel to maitain his fires;
As old Time makes these decay,
  So his flames must waste away.

But smooth and steadfast mind,
  Gentle thoughts, and calm desires,
Hearts with equal love combined,
  Kindle never dying fires:-
Where these are not, I despise
  Lovely cheeks or lips or eyes.

(No tears, Celia, now shall win 
My resolv'd heart to return; 
I have search'd thy soul within, 
⁠And find nought but pride and scorn: 
I have learn'd thy arts, and now 
Can disdain as much as thou. 
Some pow'r, in my revenge, convey 
That love to her I cast away. )

T.Carew. (A17th.C .Poet )                                  
(Golden Treasury -'THE TRUE BEAUTY'- poem 87, page74)
( 1874 Edition, Edited by Mr. F.T.Palgrave. 
Published by Macmillan and company
 London and New York )
 Disdain Returned.
(Golden Treasury -'THE TRUE BEAUTY'- poem 87, page74)

ನೋಡಿ
ಇಂಗ್ಲಿಷ್ ಸಾಹಿತ್ಯ
ಒಂದು ಬಯಕೆ
ಪ್ರಿಯತಮೆಗೆ
ಪ್ರಿಯತಮೆ ಆಂಥಿಯಾಳಿಗೆ
 ನ್ಯೂಮನನ `ಲೀಡ್, ಕೈಂಡ್ಲಿ ಲೈಟ್: ಕರುಣಾಳು ಬಾ ಬೆಳಕೆ
 Sally in Our Alley: ಬಾಲ್ಯ ಪ್ರೇಮ - (12 ಪ್ರಾಯದ ಬಾಲಿಶ ಪ್ರೇಮ)
 THE TRUE BEAUTY;-ಥಾಮಸ್ ಕೇರ್ವ್(1594-1640)- ನೈಜ ಸೌಂದರ್ಯ

ಮೂಲ
ಕವನ: Disdain Returned.
The text comes under creative commons.
Text is available under the Creative Commons Attribution-ShareAlike License

Category: ಭಾವಗೀತೆಗಳು
ವರ್ಗ: ಕನ್ನಡ ಸಾಹಿತ್ಯ
ವರ್ಗ: ಇಂಗ್ಲಿಷ್ ಸಾಹಿತ್ಯ

ಪರಿವಿಡಿ

ಉಲ್ಲೇಖ